ಮೈಲು ತುತ್ತು ಸೇವಿಸಿ ಸಾವು

ಸಾಂದರ್ಭಿಕ ಚಿತ್ರ

ಕಾರ್ಕಳ : ಈದು ಗ್ರಾಮದ ಕಂಬಳದಡ್ಡು ನಿವಾಸಿ ದೇವಪ್ಪದಾಸ್ (45) ಮೈಲುತುತ್ತು ಸೇವಿಸಿ ಮೃತಪಟ್ಟಿದ್ದಾರೆ. ಅವರು ಕಳೆದ ನ 8ರಂದು ತಲೆ ನೋವಿನ ಮಾತ್ರೆಯ ಬದಲು ಅಪ್ಪತಪ್ಪಿ ಮೈಲುತುತ್ತು ಸೇವಿಸಿದ ಹಿನ್ನೆಲೆಯಲ್ಲಿ ತೀವ್ರ ಅಸ್ವಸ್ಥರಾದ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾರೆÉ.