ವ್ಯಕ್ತಿ ಮೃತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ರಾಮತೀರ್ಥ ಕ್ರಾಸ್ ಬಳಿ ಶನಿವಾರ ರೈಲು ಡಿಕ್ಕಿ ಹೊಡೆದು ಕರ್ಕಿ ತೊಪ್ಪಲಕೇರಿಯ ಸುಧಾಕರ ಶಿವಾ ನಾಯ್ಕ ಎನ್ನುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇವರು ಎಪಿಎಂಸಿಯಲ್ಲಿ ಕಳೆದ 5 ವರ್ಷಗಳಿಂದ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದರು. ಯಾವುದೋ ಕಾರಣಕ್ಕೆ ರೈಲು ಹಳಿಯ ಮೇಲೆ ಚಲಿಸುತ್ತಿರುವಾಗ ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಕುರಿತು ಮೃತನ ಪುತ್ರ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

LEAVE A REPLY