ಕೊಲೆಕಾಡಿಯಲ್ಲಿ ವ್ಯಕ್ತಿ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿಗೆ ಸಮೀಪದ ಅತಿಕಾರಿಬೆಟ್ಟು ಗ್ರಾಮ ಪಂಚಾಯತಿಯ ಕೊಲೆಕಾಡಿ ರೈಲ್ವೇ ಗೇಟ್ ಬಳಿಯ ಹಾಡಿಯಲ್ಲಿ ವ್ಯಕ್ತಿಯೊಬ್ಬ ಮರಕ್ಕೆ ತನ್ನ ಅಂಗಿಯನ್ನು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಳಕುಂಜೆ ಗ್ರಾ ಪಂ ವ್ಯಾಪ್ತಿಯ ಕವಾತ್ತಾರು ಐದು ಸೆನ್ಸ್ ಕಾಲೊನಿ ಬಳಿ ನಿವಾಸಿ ರವಿ ಪೂಜಾರಿ (52) ಮೃತ ವ್ಯಕ್ತಿ. ಈತ ಕೂಲಿ ಕೆಲಸ ಮಾಡುತ್ತಿದ್ದು ರಾತ್ರಿ ಹೊತ್ತು ಕೊಲೆಕಾಡಿ

ರಸ್ತೆ ಬಳಿಯ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಬೆಳಗ್ಗಿನ ಜಾವ ಹಾಡಿಯ ಪಕ್ಕದಲ್ಲಿರುವ ಮನೆಯವರಾದ ಸುದೇಶ್ ಎಂಬವರು ಮರದಲ್ಲಿ ನೇತಾಡುವ ವ್ಯಕ್ತಿಯನ್ನು ಕಂಡು ಭಯಭೀತರಾಗಿ ಕೂಡಲೇ ಮುಲ್ಕಿ ಪೊಲೀಸರಿಗೆ ತಿಳಿಸಿದ್ದಾರೆ.

ಮೃತರಿಗೆ ಮೂವರು ಮಕ್ಕಳಿದ್ದು ಶವ ನೇತಾಡುತ್ತಿದ್ದ ಮರದ ಬಳಿ ಮದ್ಯದ ಬಾಟಲುಗಳು ಸಹಿತ ತಿಂಡಿ ಪೊಟ್ಟಣ ಪತ್ತೆಯಾಗಿದೆ. ಮುಲ್ಕಿ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.