ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಬಿಸಾಡುತ್ತಿದ್ದ ವ್ಯಕ್ತಿ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಬಿಸಾಡುತ್ತಿದ್ದ ವೇಳೆ ಓಮ್ನಿ ಹಾಗೂ ಚಾಲಕನನ್ನು ಮಂಗಳವಾರ ಬೆಳಿಗ್ಗೆ ಮಂಜೇಶ್ವರ ಪೆÇಲೀಸರು ಸೆರೆಹಿಡಿದಿದ್ದಾರೆ.

ಹೋಟೆಲ್ ತ್ಯಾಜ್ಯವನ್ನು ಪ್ಲಾಸ್ಟಿಕ್ ಬಕೆಟಿನಲ್ಲಿ ತುಂಬಿಸಿ ಓಮ್ನಿಯಲ್ಲಿ ತಂದು ಕೈಕಂಬ ಹೆದ್ದಾರಿ ಪರಿಸರದಲ್ಲಿ ಬಿಸಾಡುತ್ತಿದ್ದಾಗ ಗಸ್ತು ನಡೆಸುತ್ತಿದ್ದ ಮಂಜೇಶ್ವರ ಠಾಣೆ ಎಸೈ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಸೆರೆಹಿಡಿದಿದ್ದಾರೆ.

ಈ ಸಂಬಂಧ ಚಾಲಕ ಬಂದ್ಯೋಡು ನಿವಾಸಿ ಅಬ್ದುಲ್ ಸತ್ತಾರ್ (37) ವಿರುದ್ಧ ಕೇಸು ದಾಖಲಿಸಿದ್ದು, ಓಮ್ನಿಯನ್ನು ವಶಪಡಿಸಿದ್ದಾರೆ.