ರೈಲು ಡಿಕ್ಕಿ : ವ್ಯಕ್ತಿ ಸಾವು

ಸಾಂದರ್ಭಿಕ ಚಿತ್ರ

 

ಹೊನ್ನಾವರ : ತಾಲೂಕಿನ ಮಾವಿನಕುರ್ವಾ ಕೊಂಕಣ ರೈಲ್ವೇ ಬಿಡ್ಜ್ ಬಳಿ ಸೋಮವಾರ ವ್ಯಕ್ತಿಯೊಬ್ಬ ರೈಲ್ವೇ ಟ್ರ್ಯಾಕ್ ಮೇಲೆ ನಡೆದು ಹೋಗುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ.

ತಾರಿಬಾಗಿಲದ ಚರ್ಚ್ ರೋಡ್ ನಿವಾಸಿ ವೆಂಕಟೇಶ ರಾಮ ತಾಂಡೇಲ್ ಮೃತ ವ್ಯಕ್ತಿ. ಈತ ಯಾವುದೋ ಕೆಲಸಕ್ಕೆಂದು ಮಾವಿಕುರ್ವಾದ ರೈಲ್ವೇ ಸೇತುವೆ ಮೇಲೆ ನಡೆದು ಹೋಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ರೈಲಿಗೆ ಅಪ್ಪಳಿಸಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಹೊಟ್ಟೆ ಹಾಗೂ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದರಿಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.