ಹೋರಿ ತಿವಿದು ವ್ಯಕ್ತಿ ಸಾವು

ಸಾಂದರ್ಭಿಕ ಚಿತ್ರ

ಶಿವಮೊಗ್ಗ :  ಇಲ್ಲಿಗೆ ಸಮೀಪದ ಆಯನೂರಿನಲ್ಲಿ ಸೋಮವಾರ ನಡೆದ ಹೋರಿ ಬೆದರಿಸುವ ಕಾರ್ಯಕ್ರಮದ ಸಂದರ್ಭ ಹೋರಿಯೊಂದು ವ್ಯಕ್ತಿಯೊಬ್ಬನನ್ನು ತಿವಿದು ಸಾಯಿಸಿದೆ. ಮೃತ ವ್ಯಕ್ತಿ ಚಂದ್ರಶೇಖರ್ (45) ಕುಂಸಿಯ ಬಾಳೆಕೊಪ್ಪ ನಿವಾಸಿಯಾಗಿದ್ದು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾಗ ದುರಂತ ಸಂಭವಿಸಿದೆ. ಈ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ.  ಗ್ರಾಮಸ್ಥರು ಹೋರಿಗಳಿಗೆ ಕೇವಲ ಪೂಜೆ ಸಲ್ಲಿಸುವುದಾಗಿ ಹೇಳಿ ನಂತರ ಈ ಕಾರ್ಯಕ್ರಮ ಆಯೋಜಿಸಿದ್ದರು. ಒಟ್ಟು 29 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಸೊರಬ ತಾಲೂಕಿನಲ್ಲಿ ಇಬ್ಬರು ಯುವಕರನ್ನು ಹೋರಿಗಳು ತಿವಿದು ಸಾಯಿಸಿದ ನಂತರ ಜಿಲ್ಲಾಡಳಿತ ಈ ಆಟಕ್ಕೆ ನಿಷೇಧ ಹೇರಿತ್ತು.