ಕಾರು ಹರಿದು ದೇವಸ್ಥಾನದ ಬಳಿ ಮಲಗಿದ್ದವ ಗಂಭೀರ

ಸಾಂದರ್ಭಿಕ ಚಿತ್ರ

ನಂದಳಿಕೆ ಸಿರಿ ಜಾತ್ರೆಯಲ್ಲಿ ದುರಂತ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಮಂಗಳವಾರ ರಾತ್ರಿ ನಂದಳಿಕೆ ಸಿರಿ ಜಾತ್ರೆಯ ಸಂದರ್ಭದಲ್ಲಿ ಮಲಗಿದ್ದ ಮೂಡಬಿದ್ರೆ ಸಮೀಪದ ಮಾರ್ಪಾಡಿ ಗ್ರಾಮದವರಾದ ಅಶೋಕ್ (27 ವ) ಎಂಬವರ ಮೇಲೆ ಕಾರು ಚಲಿಸಿ ಗಂಭೀರ ಗಾಯಗೊಂಡಿದ್ದಾರೆ.

ಇವರು ಮಂಗಳವಾರ ತಮ್ಮ ಕುಟುಂಬಸ್ಥರೊಂದಿಗೆ ನಂದಳಿಕೆಯ ಸಿರಿಜಾತ್ರೆಗೆ ಬಂದಿದ್ದು ಜಾತ್ರೆ ಮುಗಿಸಿದ ಬಳಿಕ ದೇವಸ್ಥಾನದ ಬಳಿಯ ಹಿಂಭಾಗದ ಗದ್ದೆಯಲ್ಲಿ ಮಲಗಿದ್ದ ವೇಳೆ ಸುಮಾರು 1.30ರ ಸಮಯಕ್ಕೆ ಜಾತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ತನ್ನ ಕಾರನ್ನು ರಿವರ್ಸ್ ತೆಗೆಯುತ್ತಿದ್ದಾಗ ಅಶೋಕ್ ಕುತ್ತಿಗೆಯ ಮೇಲೆ ಕಾರು ಹರಿದ ಪರಿಣಾಮ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಸಿರಿಜಾತ್ರೆಗೆ ಆಗಮಿಸುತ್ತಿದ್ದು ವಾಹನಗಳ ಸಂಚಾರ ನಿಯಂತ್ರಣ ಹಾಗೂ ಪಾರ್ಕಿಂಗ್ ಬಗ್ಗೆ ದೇವಳದ ಸಮಿತಿ ಸೂಕ್ತ ಮುನ್ನೆಚ್ಚರಿಕೆ ವಹಿಸಿದ್ದಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತಿರಲಿಲ್ಲ.