ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ವೇಣೂರು ಸಮೀಪದ ಕರಿಮಣೇಲು ಗ್ರಾಮದಲ್ಲಿ ಓರ್ದೆಲು ಎಂಬಲ್ಲಿ ವ್ಯಕ್ತಿಯೊಬ್ಬರು ಸೋಮವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕರಿಮಣೇಲು ಗ್ರಾಮದ ಓರ್ದೇಲು ಎಂಬಲ್ಲಿನ ನಿವಾಸಿ ವಿನ್ಸೆಂಟ್ ಮೋರಾಸ್ (59) ಆತ್ಮಹತ್ಯೆ ಮಾಡಿಕೊಂಡವರು.

ಕೃಷಿಕರಾಗಿದ್ದ ವಿನ್ಸೆಂಟ್ ಅಡಿಕೆ, ತೆಂಗಿನಕಾಯಿ ವ್ಯಾಪಾರವನ್ನು ಮಾಡಿಕೊಂಡಿದ್ದರು. ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಇವರು ಸಾಲವನ್ನೂ ಮಾಡಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಸಹೋದರನಲ್ಲಿ ಯಾವುದೋ ವ್ಯವಹಾರದ ಹಣ ಬಂದಿದೆಯೋ ಎಂದು ವಿಚಾರಿಸಿದ್ದರು. ಅದು ಬಂದಿಲ್ಲ ಎಂದು ಸಹೋದರ ತಿಳಿಸಿ ಅಂಗಡಿಗೆ ಹೋಗಿದ್ದರು. ವಿನ್ಸೆಂಟ್ ಬಳಿಕ

ಮನೆಯ ಕೋಣೆಯೊಂದರ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಹೋದರನ ಮಗಳು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತರ ಸಹೋದರ ಲೂಕೋಸ್ ಕೊರೆಯಾ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.


ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಟ್ಟಡ ನಿರ್ಮಾಣ ಕಾರ್ಮಿಕ ಕರ್ನಾಟಕ ನಿವಾಸಿ ಉಪ್ಪಳದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.

ಕರ್ನಾಟಕದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಅಂಗರಕಟ್ಟೆ ನಿವಾಸಿ ದಿ ಶಿವಪ್ಪ ಎಂಬವರ ಪುತ್ರ ಮಹೇಶ (26) ಮೃತ ವ್ಯಕ್ತಿ. ಹಲವು ವರ್ಷಗಳಿಂದ ಉಪ್ಪಳದಲ್ಲಿ ನಿರ್ಮಾಣ ಕಾರ್ಮಿಕನಾಗಿ ದುಡಿಯುತ್ತಿದ್ದ ಮಹೇಶ ಮತ್ತಿಬ್ಬರು ಕಾರ್ಮಿಕರೊಂದಿಗೆ ಉಪ್ಪಳ ಗೋಲ್ಡನ್ ಗಲ್ಲಿಯ ಕ್ವಾರ್ಟರ್ಸಿನಲ್ಲಿ ವಾಸಿಸುತ್ತಿದ್ದರು. ಜತೆಗಿದ್ದವರು ಕೆಲಸಕ್ಕೆ ತೆರಳಿದ್ದು, ಮಹೇಶ ಮಾತ್ರ ಕೊಠಡಿಯೊಳಗಿದ್ದನು. ಬೆಳಿಗ್ಗೆ ಕುಮಾರ್ ಎಂಬಾತಗೆ ಫೆÇೀನ್ ಕರೆ ಮಾಡಿದ ಮಹೇಶ್ ತಾನು ಊರಿಗೆ ತೆರಳುವುದಾಗಿಯೂ ಇದರಿಂದ ನೀನು ಉಪ್ಪಳ ಬಸ್ ನಿಲ್ದಾಣಕ್ಕೆ ಬರಬೇಕೆಂದು ತಿಳಿಸಿದ್ದನು. ಅದರಂತೆ ಕುಮಾರ್ ಕೆಲಸ ಸ್ಥಳದಿಂದ ಉಪ್ಪಳ ಬಸ್ ನಿಲ್ದಾಣಕ್ಕೆ ತಲುಪಿದ್ದು, ಆದರೆ ಅಲ್ಲಿ ಮಹೇಶ್ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ಕುಮಾರ್ ಕೊಠಡಿಗೆ ತೆರಳಿ ನೋಡಿದಾಗ ಮಹೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಹಗ್ಗ ತುಂಡರಿಸಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು ಸಂಭವಿಸಿದೆ. ಪೆÇೀಲೀಸರು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಯ ಬಳಿಕ ಸೋಮವಾರ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.