ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಬೆಳ್ಮಣ್ಣು ಗುಂಡಾವು ಮನೆ ನಿವಾಸಿ ಜೆರೋಮ್ ನೊರೋನ್ಹಾ(58) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಅವರು ಶುಕ್ರವಾರ ರಾತ್ರಿ ಮನೆ ಸಮೀಪ ವಿಷ ಸೇವಿಸಿದ್ದು ಅಸ್ವಸ್ಥಗೊಂಡ ಬಳಿಕ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.