ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡ ಘಟನೆ ಹಳೆಯಂಗಡಿ ಸಮೀಪದ ಲೈಟ್ ಹೌಸ್ ರೈಲ್ವೇ ಗೇಟ್ ಬಳಿ ನಡೆದಿದೆ. ಅತ್ಮಹತ್ಯೆ ಮಾಡಿಕೊಂಡವರನ್ನು ಲೈಟ್ ಹೌಸ್ ನಿವಾಸಿ ಸೀತಾರಾಮ ಕುಲಾಲ್ (41) ಎಂದು ಗುರುತಿಸಲಾಗಿದೆ.

ರಾತ್ರಿ ಸುಮಾರು 10 ಗಂಟೆಗೆ ಸುರತ್ಕಲ್ಲಿನಲ್ಲಿ ಅಂಗಡಿ ಕೆಲಸ ಮುಗಿಸಿ ಹಳೆಯಂಗಡಿಯಿಂದ ಲೈಟ್ ಹೌಸ್ ಕಡೆಗೆ ನಡೆದುಕೊಂಡು ಬರುತ್ತಿದ್ದ ಸೀತಾರಾಮನನ್ನು ಭಾವ ಉದಯ ಬೈಕಿನಲ್ಲಿ ಬರುವಂತೆ ತಿಳಿಸಿದಾಗ ಬರುವುದಿಲ್ಲ ಎಂದು ಹೇಳಿದ್ದಾನೆ. ಬಳಿಕ ರಾತ್ರಿ 11 ಗಂಟೆಯಿಂದ ಭಾನುವಾರ ಬೆಳಗ್ಗೆ 4 ಗಂಟೆ ಮೊದಲು ಅತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು ಭಾನುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಸುರತ್ಕಲ್ಲಿನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ ಸೀತಾರಾಮರು ಅರ್ಥಿಕವಾಗಿ ಬಳಲುತ್ತಿದ್ದು, ಇದಕ್ಕಾಗಿ ಅತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಭಾವ ಉದಯ ನೀಡಿದ ದೂರಿನಂತೆ ಮುಲ್ಕಿ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರೈಲ್ವೇ ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.