ಹಾವು ಕಚ್ಚಿದ್ದ ವ್ಯಕ್ತಿ ಒಟ್ಟಿಗೇ ಸಾಯಲು ಹೆಂಡತಿಯ ಕಚ್ಚಿದ

ಸಾಂದರ್ಭಿಕ ಚಿತ್ರ

ಪಾಟ್ನಾ : ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಪತ್ನಿ ಜೊತೆ ಒಟ್ಟಿಗೆ ಸಾಯಲು ಪತ್ನಿಯನ್ನು ಕಚ್ಚಿದ್ದಾನೆ. ಘಟನೆ ಬಿಹಾರದ ಸಮಷ್ಠಿಪುರ್ ಜಿಲ್ಲೆ ಬಿರಸಿಂಗಪುರದಲ್ಲಿ ನಡೆದಿದೆ. ಶಂಕರ್ ರಾಯ್ ರಾತ್ರಿ ಮನೆಯಲ್ಲಿ ಮಲಗಿದ್ದ ಸಂದರ್ಭ ವಿಷಸರ್ಪವೊಂದು ಕಚ್ಚಿದೆ. ಬೆಳಗ್ಗೆ ಎದ್ದ ಆತನಿಗೆ ಹಾವು ಕಚ್ಚಿರುವುದು ಗಮನಕ್ಕೆ ಬಂದಿದೆ. ಆದರೆ, ಕಾಲ ಮೀರಿದ್ದರಿಂದ ತಾನು ಬದುಕುವುದಿಲ್ಲ ಎಂದು ಗೊತ್ತಾಗಿದೆ. ಕೂಡಲೇ ಹೆಂಡತಿ ಬಳಿಗೆ ತೆರಳಿದ ಶಂಕರ್, ನಿನ್ನನ್ನ ಬಿಟ್ಟು ತೆರಳಲು ನನಗೆ ಇಷ್ಟವಿಲ್ಲ. ಒಟ್ಟಿಗೆ ಸಾಯೋಣವೆಂದು ಪತ್ನಿ ಕೈಗೆ ಕಚ್ಚಿದ್ದಾನೆ. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯತಾದರೂ ಶಂಕರ್ ರಾಯ್ ಮೃತಪಟ್ಟಿದ್ದಾನೆ. ಪತ್ನಿ ಅಮಿರಿದೇವಿಯನ್ನ ವೈದ್ಯರು ಉಳಿಸಿದ್ದಾರೆ.