ಬಾರ್ ವೈಟರಗೆ ಹೆಲ್ಮೆಟ್ಟಿನಿಂದ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆ ಸಮೀಪದ ಆರ್ಶೀವಾದ್ ಜಂಕ್ಷನಿನಲ್ಲಿ ಶನಿವಾರ ತಡರಾತ್ರಿ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಬಾರ್ ವೈಟರನ್ನು ಅಡ್ಡಗಟ್ಟಿ ಹೆಲ್ಮೆಟ್ಟಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ಉಡುಪಿ ನಗರದ ಹೊರವಲಯದ ಅಂಬಾಗಿಲು ಚಾಲುಕ್ಯ ಬಾರಿನಲ್ಲಿ ವೈಟರ್ ಆಗಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಮಡಿವಾಳ (24) ಹಲ್ಲೆಗೊಳಗಾದವ. ಮಹೇಶ್ ಆಚಾರ್ಯ ಎಂಬಾತ ಹಲ್ಲೆ ನಡೆಸಿದ ಆರೋಪಿ.


ಮದ್ಯ ಸೇವಿಸಿದಾತನ ಶವ ಗುಡ್ಡದಲ್ಲಿ ಪತ್ತೆ

ನಮ್ಮ ಪ್ರತಿನಿಧಿ ವರದಿ

ಸುಳ್ಯ : ಸುಬ್ರಹ್ಮಣ್ಯ ಪೆÇೀಲಿಸ್ ಠಾಣಾ ವ್ಯಾಪ್ತಿಯ ದೇವಚಳ್ಳ ಎಂಬಲ್ಲಿ ಬೋಜಪ್ಪ ಗೌಡ (57) ಎಂಬವರು ವಿಪರೀತ ಮದ್ಯಸೇವಿಸಿ ಮನೆ ಪಕ್ಕದ ಗುಡ್ಡದಲ್ಲಿ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

ಬೋಜಪ್ಪಗೌಡರ ಮದ್ಯ ಸೇವನೆಯ ಚಟದಿಂದಾಗಿ ಪತ್ನಿಮಕ್ಕಳು ಬೇರೆ ಕಡೆ ವಾಸಿಸುತ್ತಿದ್ದರು. ನಿನ್ನೆ ಮಧ್ಯಾಹ್ನ ಬಳಿಕ ಗೌಡರು ನಾಪತ್ತೆಯಾಗಿದ್ದಾರೆಂದು ತಿಳಿದ ಬಳಿಕ ಮನೆಯವರು ಹುಡುಕಿದಾಗ ಗುಡ್ಡದಲ್ಲಿ ಶವ ಪತ್ತೆಯಾಯಿತೆನ್ನಲಾಗಿದೆ.


ಅಪರಿಚಿತ ವ್ಯಕ್ತಿಯ ಶವ ಪತ್ತೆ ; ಕೊಲೆ ?

ಮಂಜೇಶ್ವರ : ತೂಮಿನಾಡು ಐಸ್ ಘಟಕ ಪರಿಸರದ ಪೆÇದರೊಂದರಲ್ಲಿ ಜೀರ್ಣಾವಸ್ಥೆಯಲ್ಲಿ ಅಪರಿಚಿತ ಮೃತ ದೇಹವೊಂದು ಪತ್ತೆಯಾಗಿದೆ.

40 ವರ್ಷ ಅಂದಾಜಿಸಲಾಗಿರುವ ವ್ಯಕ್ತಿಯ ಶವ ಚಡ್ಡಿ ಧರಿಸಿದ ಸ್ಥಿತಿಯಲ್ಲಿತ್ತು. ಮೃತ ದೇಹಕ್ಕೆ ಎರಡು ವಾರವಾಗಿರಬಹುದು ಎಂದು ಅಂದಾಜಿಸಲಾಗಿದೆ. ಅನ್ಯ ರಾಜ್ಯದವರು ವಾಸವಾಗಿರುವ ಪರಿಸರದಲ್ಲೇ ಈ ಮೃತ ದೇಹಪತ್ತೆಯಾಗಿದೆ. ಸಾಧಾರಣವಾಗಿ ಇಲ್ಲಿ ಸಂಜೆಯಾಗುವಾಗ ಪರಸ್ಪರ ಕುಡಿದು ಹೊಡೆದಾಟ ನಡೆಯುತ್ತಿರುವುದು ದಿನ ನಿತ್ಯದ ದೃಶ್ಯವಾಗಿರುವ ಹಿನ್ನೆಲೆಯಲ್ಲಿ ಪರಸ್ಪರ ಹೊಡೆದಾಡುವಾಗ ಸಾವು ಸಂಭವಿಸಿರಬಹುದಾ ಎಂಬ ಶಂಕೆಯನ್ನು ಊರವರು ವ್ಯಕ್ತಪಡಿಸಿದ್ದಾರೆ.