ಬೇಲಿ ಜಗಳ : ವ್ಯಕ್ತಿಗೆ ಹಲ್ಲೆ

ಸಾಂದರ್ಭಿಕ ಚಿತ್ರ

ಶಿರಸಿ : ಅಜ್ಜೀಬಳ ಸಮೀಪದ ಕರೂರಿನಲ್ಲಿ ಮಂಗಳವಾರ ರಾತ್ರಿ 2 ಮನೆಗಳ ಮಧ್ಯ ಬರುವ ಬೇಲಿ ವಿಷಯದ ಜಗಳಕ್ಕೆ ವ್ಯಕ್ತಿಗೆ ಪಕ್ಕದ ಮನೆಯವರು ಹಲ್ಲೆ ನಡೆಸಿ ತಲೆಗೆ ಪೆಟ್ಟು ತಗುಲಿದೆ.

ಗಣಪತಿ ಮಹಾಬಲ ನಾಯ್ಕ ಎನ್ನುವವರ ತಲೆಗೆ ಪೆಟ್ಟಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಲ್ಲೆ ನಡೆಸಿದ ಪಕ್ಕದ ಮನೆಯ ಗಣಪತಿ ಬೀರಾ ನಾಯ್ಕ ನಾಪತ್ತೆಯಾಗಿದ್ದಾನೆ. ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY