ವ್ಯಕ್ತಿಗೆ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಸಾರ್ವಜನಿಕ ದಾರಿಗೆ ತಂತಿಬೇಲಿ ಹಾಕಿ ಓಡಾಟಕ್ಕೆ ಅಡ್ಡಿಪಡಿಸಿರುವುದನ್ನು ಪ್ರಶ್ನಿಸಿ ದೂರು ನೀಡಿದಾತನಿಗೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನಿಟ್ಟೆ ಗ್ರಾಮದ ಬೈದಾಳ್ ಎಂಬಲ್ಲಿ ನಡೆದಿದೆ.

ಬೈದಾಳ್ ನಿವಾಸಿ ರಾಬರ್ಟ್ ಲೋಬೊ ಎಂಬವರು ಸಾರ್ವಜನಿಕ ರಸ್ತೆಗೆ ತಂತಿಬೇಲಿ ಹಾಕಿರುವುದನ್ನು ಸ್ಥಳೀಯರಾದ ಸೆವ್ರಿನ್ ಡಿಸೋಜ ಎಂಬವರು ಆಕ್ಷೇಪಿಸಿ ತಂತಿಬೇಲಿಯನ್ನು ತೆರವುಗೊಳಿಸುವಂತೆ ನಿಟ್ಟೆ ಗ್ರಾಮ ಪಂಚಾಯತಿಗೆ ದೂರು ನೀಡಿದ್ದರು. ಈ ದೂರಿನನ್ವಯ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒ ಸಾಮಾಜಿಕ ನ್ಯಾಯ ಸಮಿತಿಯ ಸದಸ್ಯರೊಂದಿಗೆ ಸ್ಥಳ ಪರಿಶೀಲನೆಗೆ ಬಂದು ದಾರಿಯನ್ನು ತೆರವುಗೊಳಿಸುವಂತೆ ರಾಬರ್ಟ್ ಲೋಬೊ ಅವರಿಗೆ ಸೂಚಿಸಿದಾಗ ಅವರು ಪಂಚಾಯತ್ ಸಿಬ್ಬಂದಿಗೆ ಬೆದರಿಕೆ ಹಾಕಿ ಬಳಿಕ ಬೇಲಿಯನ್ನು ತೆರವುಗೊಳಿಸಲು ಬಂದ ಸೆವ್ರಿನ್ ಡಿಸೋಜರಿಗೆ ಹಲ್ಲೆ ನಡೆಸಿದ್ದಾರೆ ಎಂದು ಸೆವ್ರಿನ್ ಡಿಸೋಜ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.