ತಲವಾರಿನಿಂದ ಹಲ್ಲೆ

ಸಾಂದರ್ಭಿಕ ಚಿತ್ರ

ಸುಳ್ಯ : ಸವಣೂರಿನ ಪರಣೆ ಎಂಬಲ್ಲಿ ಆಸೀಫ್ ಎಂಬಾತನಿಗೆ ಕನ್ನಡಕುಮೇರು ನಿವಾಸಿ ನಾಸಿರ್ ತಲವಾರಿನಿಂದ ಎಡ ತೊಡೆಯ ಭಾಗಕ್ಕೆ, ಎಡಕೈ, ಕಿರುಬೆರಳುಗಳಿಗೆ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿದೆ.

ಆಸೀಫ್ ಆಗಾಗ ಗಾಂಜಾ ಸೇವಿಸಿ ಕಿರುಕುಳ ನೀಡುತ್ತಿದ್ದನೆಂದು ನಾಸಿರ್ ಹಲ್ಲೆ ನಡೆಸಿರುವುದಾಗಿ ಪೆÇಲೀಸರ ತನಿಖೆಯಿಂದ ತಿಳಿದುಬಂದಿದೆ. ಗಾಯಾಳು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬೆಳ್ಳಾರೆ ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.