ಪೆÇಲೀಸ್ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪೆÇಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತರಾದ ಕೆ ಕೆ ರಸ್ತೆಯ ಉದಯ್ ಕುಮಾರ್ (31) ಮತ್ತು ಬಜಕೂಡ್ಲು ನಿವಾಸಿ ಅಶ್ವತ್ಥ(27)ನನ್ನು ಬದಿಯಡ್ಕ ಪೆÇಲೀಸರು ಬಂಧಿಸಿದ್ದಾರೆ.

ಪೆರ್ಲ ನೆಲ್ಲಿಕುಂಜೆ ಮಹಾವಿಷ್ಣು ದೇವಸ್ಥಾನದ ನಾಮಫಲಕವನ್ನು ಹಾನಿಗೊಳಿಸಿದ ಬಗ್ಗೆ ತನಿಖೆ ನಡೆಸಲು ಬಂದ ಪೆÇಲೀಸರನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.