13 ಲಕ್ಷ ರೂ ಅಮಾನ್ಯ ನೋಟಿನೊಂದಿಗೆ ಒಬ್ಬ ಸೆರೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕೇರಳ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಸಾಗಿಸಲಾಗುತಿದ್ದ 13 ಲಕ್ಷ ರೂ ಅಮಾನ್ಯ ನೋಟಿನೊಂದಿಗೆ ಅಬಕಾರಿ ಪೆÇಲೀಸರು ಒಬ್ಬನನ್ನು ಮಂಜೇಶ್ವರಕ್ಕೆ ಸಮೀಪದ ವಾಮಂಜೂರು ಚೆಕ್ ಪೆÇೀಸ್ಟಿನಲ್ಲಿ ಸೆರೆ ಹಿಡಿದಿದ್ದಾರೆ.

ಮೂಲತಃ ಮುಂಬೈ ಮರಾಠಿಗನಾಗಿರುವ ಹಾಗೂ ಕಳೆದ 13 ವರ್ಷಗಳಿಂದ ಕಣ್ಣೂರಿನಲ್ಲಿ ವಾಸವಾಗಿರುವ ದನಾಜೆ (40) ಸೆರೆಗೀಡಾದ ವ್ಯಕ್ತಿ.

ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ತೆರಳುತಿದ್ದ ಕೇರಳ ಕೆ ಎಸ್ ಆರ್ ಟಿ ಸಿ ಬಸ್ಸನ್ನು ಅಬಕಾರಿ ಪೆÇಲೀಸರು ತಡೆದು ತಪಾಸಣೆಗೈಯುತ್ತಿರುವ ಮಧ್ಯೆ ಚೀಲದಲ್ಲಿ ತುಂಬಿಸಲಾಗಿದ್ದ ಅಮಾನ್ಯ ನೋಟಿನ ಕಟ್ಟು ಪತ್ತೆಯಾಗಿದೆ. ಕೂಡಲೇ ಅದನ್ನು ವಶಕ್ಕೆ ತೆಗೆದುಕೊಂಡ ಅಬಕಾರಿ ಪೆÇಲೀಸರು ಜತೆಯಾಗಿದ್ದ ಧನಾಜೆಯನ್ನು ಕೂಡಾ ವಶಕ್ಕೆ ತೆಗೆದಿದ್ದಾರೆ.

ಅಮಾನ್ಯಗೊಂಡ 1000 ರೂ ಮುಖಬೆಲೆಯ 1200 ನೋಟುಗಳು ಹಾಗೂ 500 ರೂ ಮುಖ ಬೆಲೆಯ 200 ಸೇರಿ 13 ಲಕ್ಷ ರೂ ನೋಟುಗಳು ಚೀಲದಲ್ಲಿ ಇದ್ದವು. ಕೆಲ ದಿನಗಳ ಹಿಂದೆ ಇದೇ ತಪಾಸಣಾ ಕೇಂದ್ರದಲ್ಲಿ 20 ಲಕ್ಷ ರೂ ಮೊತ್ತದ ಅಮಾನ್ಯಗೊಂಡ ನೋಟುಗಳನ್ನು ವಶಕ್ಕೆ ತೆಗೆಯಲಾಗಿತ್ತು.

ಇದೀಗ ಸೆರೆಯಾದ ವ್ಯಕ್ತಿ ಚಿನ್ನದ ಮಾರಾಟಗಾರನೆಂದು ಹೇಳುತ್ತಿದ್ದು, ಸ್ವಂತ ಬಳಕೆಗಾಗಿ ಅವನ್ನು ಒಯ್ಯುತ್ತಿದ್ದೆ ಎಂದು ಹೇಳುತಿದ್ದಾನೆ. ಈತನನ್ನು ಹಾಗೂ ವಶಪಡಿಸಲಾದ ಹಣವನ್ನು ಮಂಜೇಶ್ವರ ಪೆÇಲೀಸರಿಗೆ ಹಸ್ತಾಂತರಿಸುವುದಾಗಿ ಅಬಕಾರಿ ಪೆÇಲೀಸರು ತಿಳಿಸಿದ್ದಾರೆ.