ಅಕ್ರಮ ಮದ್ಯ : ಬಂಧನ

ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ : ಬಾರ್ಯ ಗ್ರಾಮದ ಮಾಣಿಲ ನಿವಾಸಿ ಶೇಖರ ಪೂಜಾರಿ ಎಂಬಾತ ಮೂರುಗೋಳಿಯಲ್ಲಿ ಸಂತೋಷ್ ಶೆಟ್ಟಿಯವರ ಅಂಗಡಿಯ ಹಿಂಭಾಗದ ಖಾಲಿ ಜಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ, ಶೇಖರ ಪೂಜಾರಿಯವರನ್ನು ಬಂಧಿಸಿ, ಅವರಲ್ಲಿದ್ದ 180 ಎಂಎಲ್ 7 ಬಾಟಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಬಜತ್ತೂರು ಗ್ರಾಮದ ಕಾಂಚನ ಕ್ರಾಸ್‍ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನೋಣಯ್ಯ ಶೆಟ್ಟಿ ಎಂಬಾತನನ್ನು ಬಂಧಿಸಿ ಆತನಲ್ಲಿದ್ದ 180 ಎಂಎಲ್ 5 ಬಾಟಲಿ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY