ಗಾಂಜಾ : ಒಬ್ಬ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಕಲ್ಸಂಕ ಜಂಕ್ಷನ್ ಬಳಿ ಮಾದಕ ಗಾಂಜಾ ಸೇವಿಸುತ್ತಿದ್ದ ಯುವಕನನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ನಗರದ ಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಬಳಿಯ ಸುಬ್ರಮಣ್ಯ ರೆಸಿಡೆಸ್ಸಿ ಲಾಡ್ಜಿನ ರೂಮ್ ನಂಬ್ರ 402 ನಿವಾಸಿ ಯೋಗೀಶ್ ಆರ್ ಗಾಣಿಗ (20) ಬಂಧಿತ ಆರೋಪಿ. ಈತನ ವಿರುದ್ಧ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.