164 ಕೇಜಿ ಗೋಮಾಂಸ ಸಹಿತ ಒಬ್ಬ ಪೊಲೀಸ್ ವಶ

ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ : ಅಕ್ರಮವಾಗಿ ದನಗಳನ್ನು ಹತ್ಯೆ ಮಾಡಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿಯ ಹೆಚ್ ಎಂ ಸಭಾಂಗಣದ ಬಳಿ ಪತ್ತೆ ಹಚ್ಚಿ ಒಬ್ಬ ಆರೋಪಿಯ ಸಹಿತ 164 ಕೇಜಿ ಗೋಮಾಂಸವನ್ನು ಉಪ್ಪಿನಂಗಡಿ ಪೆÇಲೀಸರು ವಶಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕು ಪೆÇಟ್ಟುಕೆರೆ ಎಂಬಲ್ಲಿ ಅಕ್ರಮವಾಗಿ ಗೋವನ್ನು ವಧಿಸಿ ಗೋ ಮಾಂಸವನ್ನು ಉಪ್ಪಿನಂಗಡಿಗೆ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೆÇಲೀಸರು ಕಾರ್ಯಾಚರಣೆ ನಡೆಸಿ, ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡರು. ಕಾರಿನಲ್ಲಿದ್ದ ಗೋಳಿತೊಟ್ಟು ನಿವಾಸಿ ಇಸುಬು ಎಂಬಾತನನ್ನು ದಸ್ತಗಿರಿ ಮಾಡಿದ ಪೆÇಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪೆÇಟ್ಟುಕೆರೆಯಿಂದ ಉಪ್ಪಿನಂಗಡಿಗೆ ಮಾರಾಟದ ಉದ್ದೇಶದಿಂದ ಈ ಗೋಮಾಂಸ ಸಾಗಾಟ ನಡೆದಿತ್ತೆನ್ನಲಾಗಿದೆ.