27,000 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ಜತೆ ಒಬ್ಬ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮಿಲ್ಮಾ ಬೂತ್ ಮಾಲಕನ ಮನೆಯಲ್ಲಿ ಅನಧಿಕೃತವಾಗಿ ಶೇಖರಿಸಿಡಲಾಗಿದ್ದ 27,000 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪೆÇಲೀಸರು ಪತ್ತೆ ಹಚ್ಚಿ ವಶಕ್ಕೆ ತೆಗೆದು ಕೊಂಡಿದ್ದಾರೆ.

ಈ ಸಂಬಂಧ ಚೆರ್ಕಳ ಪರಿಸರವಾಸಿ ಮೊಯ್ದು (35) ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ. ಬುಧವಾರ ಬೆಳಿಗ್ಗೆ ವಿದ್ಯಾನಗರ ಪೆÇಲೀಸರು ದಾಳಿ ನಡೆಸಿದ್ದಾರೆ. ಮನೆಯೊಳಗಿನ ಒಂದು ಕೊಠಡಿ ಹಾಗೂ ಸ್ನಾನದ ಕೊಠಡಿಯಲ್ಲಿ ನಿಷೇಧಿತ ಉತ್ಪನ್ನಗಳನ್ನು ಬಚ್ಚಿಡಲಾಗಿತ್ತು. ಈ ಉತ್ಪನ್ನಗಳನ್ನು ಮಿಲ್ಮಾ ಬೂತಿನಲ್ಲಿ ಮಾರಾಟ ನಡೆಸುತ್ತಿದ್ದುದಾಗಿ ಪೆÇಲೀಸರು ತಿಳಿಸಿದ್ದಾರೆ.