ಉದ್ಯಮಿಗೆ ಬೆದರಿಕೆಯೊಡ್ಡಿದಾತನ ಸೆರೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ವಾಲ್ಪಾಡಿ ಗ್ರಾಮದ ಬೋರುಗುಡ್ಡೆಯ ಶಾಮಿಯಾನ ಉದ್ಯಮಿ ನಾರಾಯಣ ಸಾಲ್ಯಾನ್ ಅವರಿಗೆ ಜೀವ ಬೆದರಿಕೆಯೊಡ್ಡಿದ್ದ ಅವರ ಸಂಬಂಧಿಯನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸ್ಥಳೀಯ ಶಾಮಿಯಾನ ಅಂಗಡಿಯೊಂದರ ಪಾಲುದಾರ ಪ್ರಶಾಂತ್ ಎಂದು ಗುರುತಿಸಲಾಗಿದೆ. ಡಿಸೆಂಬರ್ 2ರ ರಾತ್ರಿ 11 ಗಂಟೆಗೆ ಆರೋಪಿ ಪ್ರಶಾಂತ್ ಅವರು ತನ್ನ ಸಂಬಂಧಿ ನಾರಾಯಣ ಸಾಲ್ಯಾನ್ ಮೊಬೈಲಿಗೆ ಕರೆ ಮಾಡಿ ಕೊಲ್ಲುವುದಾಗಿ ಜೀವಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಬೋರುಗುಡ್ಡೆಯಲ್ಲಿ ನಡೆದ ಸತ್ಯನಾರಾಯಣ ಪೂಜಾ ಕಾರ್ಯಕ್ಕೆ ನಾರಾಯಣ ಸಾಲ್ಯಾನ್ ಅವರು ಪ್ರಶಾಂತ್ ಅವರಿಗಿಂತ ಕಡಿಮೆ ದರದಲ್ಲಿ ಶಾಮಿಯಾನ ಸಾಮಾಗ್ರಿಗಳನ್ನು ಒದಗಿಸಿದ್ದರಿಂದ ಪ್ರಶಾಂತ್ ಅವರಿಗೆ ವ್ಯವಹಾರ ಕೈತಪ್ಪಿಹೋಯಿತೆನ್ನಲಾಗಿದೆ. ಈ ಸಿಟ್ಟಿನಿಂದ ಆತ ನಾರಾಯಣ ಅವರಿಗೆ ಮೊಬೈಲಿನಲ್ಲಿ ಕೊಲೆ ಬೆದರಿಕೆ ಒಡ್ಡಲು ಕಾರಣ ಎನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಮಂಗಳವಾರ ಪ್ರಶಾಂತನÀನ್ನು ಬಂಧಿಸಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.

 

LEAVE A REPLY