ಶಾಲೆಯ ಬೀಗ ಮುರಿದು ಮೊಬೈಲ್, ನಗದು ಕದ್ದ ಆರೋಪಿ ಬಂಧನ

ಕಾಸರಗೋಡು : ನಾಯ್ಮಾರ್ ಮೂಲೆಯಲ್ಲಿರುವ ತಲ್ಬೀವುಲ್ ಇಸ್ಲಾಂ ಹೈಯರ್ ಸೆಕಂಡರಿ ಶಾಲೆಯ ಬೀಗ ಮುರಿದು ಒಳನುಗ್ಗಿ 15 ಮೊಬೈಲ್ ಫೋನ್ ಹಾಗೂ ಹಣವನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೆÇಲೀಸರು ಬಂಧಿಸಿದ್ದಾರೆ.

ಕರ್ನಾಟಕ ಪುತ್ತೂರು ಕೋಕ್ರಾ ನೆಲ್ಯಾಡಿ ಶಾಂತಿಪಟ್ಟು ನಿವಾಸಿ ಅಶ್ರಫ್ (30) ಬಂಧಿತ ಆರೋಪಿ. ಮಂಜೇಶ್ವರ ಸಮೀಪದ ಕುಂಜತ್ತೂರಿನ ಪತ್ನಿ ಮನೆಯಲ್ಲಿ ವಾಸಿಸುತ್ತಿದ್ದ ಈತ ಕೆಲದಿನ ಸಂಶಾಯಸ್ಪದ ರೀತಿಯಲ್ಲಿ ನಾಯ್ಮರ್ ಮೂಲೆಯಲ್ಲಿ ತಿರುಗಾಡುತ್ತಿರುವಾಗ ವಿದ್ಯಾನಗರ ಪೆÇಲೀಸರು ಈತನನ್ನು ಸೆರೆಹಿಡಿದಿದ್ದಾರೆ. ಬಳಿಕ ತನಿಖೆಗೊಳಪಡಿಸಿದಾಗ ಕಳವು ನಡೆಸಿದ ಮಾಹಿತಿ ಲಭಿಸಿದೆ. ಎಪ್ರಿಲ್ 17ಕ್ಕೆ ಕಳವು ನಡೆದಿತ್ತು. ವಿದ್ಯಾರ್ಥಿಗಳು ತರಗತಿಗಳಿಗೆ ತಂದ ಮೊಬೈಲುಗಳನ್ನು ಅಧ್ಯಾಪಕರು ತೆಗೆದಿಟ್ಟಿದ್ದರು. ಈ ಮೊಬೈಲನ್ನು ಕಳವುಗೈಯಲಾಗಿತ್ತು.