ಜುಗಾರಿಗಾಗಿ ಹಣ ಸಂಗ್ರಹ : ಆರೋಪಿ ಬಂಧನ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಉಡುಪಿ : ಹಿರಿಯಡ್ಕ ಸಮೀಪದ ಆತ್ರಾಡಿ ಜಂಕ್ಷನ್ ಬಳಿ ಮಟ್ಕಾ ಜುಗಾರಿಗಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪಿ ಆತ್ರಾಡಿ ಪರೀಕ ಶ್ರೀ ಮುಖ್ಯಪ್ರಾಣ ಮನೆ ನಿವಾಸಿ ಪ್ರಕಾಶ್ ಶೆಟ್ಟಿ ಎಂಬಾತನನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 1,180 ರೂ ವಶಪಡಿಸಿಕೊಳ್ಳಲಾಗಿದೆ.


ಮದ್ಯ ಸಹಿತ ವ್ಯಕ್ತಿ ಬಂಧನ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನೀರ್ಚಾಲು ಸಮೀಪದ ಮಾನ್ಯದಿಂದ 15 ಪ್ಯಾಕೆಟ್ ವಿದೇಶಿ ಮದ್ಯ ವಶಪಡಿಸಿಕೊಂಡಿರುವ ಅಬಕಾರಿ ದಳ ಈ ಸಂಬಂಧ ಮಾನ್ಯ ನಿವಾಸಿ ಸತೀಶನನ್ನು ಬಂಧಿಸಿದೆ. ಅಬಕಾರಿ ದಳ ಕೂಲಿಕಾರ್ಮಿಕರ ವೇಷ ಧರಿಸಿ ಕಾರ್ಯಾಚರಣೆ ನಡೆಸಿತ್ತು.