ಸ್ವಂತ ನಿಧನ ವರದಿ, ಜಾಹೀರಾತು ನೀಡಿ ನಾಪತ್ತೆಯಾದ ವ್ಯಕ್ತಿ ಪತ್ತೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸ್ವಂತ ನಿಧನ ವರದಿ ಹಾಗೂ ಶ್ರದ್ದಾಂಜಲಿ ಜಾಹೀರಾತುಗಳನ್ನು ಪತ್ರಿಕೆಗಳಿಗೆ ನೀಡಿದ ಬಳಿಕ ನಾಪತ್ತೆಯದ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ.

ತಳಿಪರಂಬ ಸಮೀಪದ ಕುತ್ತಿಕ್ಕೋಲ್ ಮೇಲುಕುನಿಲ್ ನಿವಾಸಿ ಜೋಸೆಫ್ (75) ಎಂಬವರನ್ನು ಕೊಟ್ಟಾಯಂನಿಂದ ಪತ್ತೆ ಹಚ್ಚಲಾಗಿದೆ. ಅಲ್ಲಿನ ಲಾಡ್ಜಿನಿಂದ ಕೊಟ್ಟಾಯಂ ಪೆÇಲೀಸರು ಜೋಸೆಫರನ್ನು ವಶಕ್ಕೆ ಪಡೆದಿದ್ದಾರೆ.

ನವಂಬರ್ 29ರಂದು ವಿವಿಧ ಪತ್ರಿಕೆ ಕಚೇರಿಗಳಿಗೆ ತೆರಳಿ ಜೋಸೆಫ್ ಸಂಬಂಧಿಕನೆಂದು ತಿಳಿಸಿ ತನ್ನ ನಿಧನ ವರದಿ ಹಾಗೂ ಜಾಹೀರಾತು ನೀಡಿದ್ದರು. ವರದಿ ಪ್ರಕಟಗೊಂಡ ಮರುದಿನ ಜೋಸೆಫ್ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಪೆÇಲೀಸರು ತನಿಖೆ ನಡೆಸಿ ಪತ್ತೆಹಚ್ಚಿದ್ದಾರೆ.

LEAVE A REPLY