ಬ್ಯಾಂಕಿನಲ್ಲಿ ನಕಲಿ ಚಿನ್ನ ಇಟ್ಟು ವಂಚನೆ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕಿನಲ್ಲಿ ನಕಲಿ ಚಿನ್ನ ಅಡವಿರಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಟಾರು ಉಯಿತ್ತಡ್ಕ ನಿವಾಸಿ ಯು ಕೆ ಹಾರಿಸ(37)ನನ್ನು ಪೂಲೀಸರು ಬಂಧಿಸಿದ್ದಾರೆ. ಮುಟ್ಟತ್ತೋಡಿ ಬ್ಯಾಂಕಿನಿಂದ ಕಳವಾದ 407 ಗ್ರಾಂ ಚಿನ್ನದ ಪೈಕಿ 77 ಗ್ರಾಂ ನಕಲಿ ಚಿನ್ನವನ್ನು ಯು ಕೆ ಹಾರಿಸ್ ಅಡವಿರಿಸಿದ್ದನೆಂದು ಹೇಳಲಾಗಿದೆ.