ಮದ್ಯ ಸಾಗಾಟ : ಒಬ್ಬ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬಿವರೇಜಸ್ ಮದ್ಯದಂಗಡಿಯಿಂದ ಮದ್ಯ ಖರೀದಿಸಿ ಸಾಗಿಸಲಾಗುತ್ತಿದ್ದ ವ್ಯಕ್ತಿಯನ್ನು ಅಬಕಾರಿ ದಳ ಬಂಧಿಸಿದೆ.

ಈತನಿಂದ 6 ಲೀಟರ್ ಮದ್ಯವನ್ನು ವಶಪಡಿಸಲಾಗಿದೆ. ಬಾಯಾರು ಸಮೀಪದ ಕನಿಯಾಲ ನಿವಾಸಿ ನಾರಾಯಣ (37) ಬಂಧಿತ ವ್ಯಕ್ತಿ. ಬಿವರೇಜಸ್ ಮದ್ಯ ದಂಗಡಿಯಿಂದ ಖರೀದಿಸಿ ಸಾಗಿಸುತ್ತಿರುವಾಗ ಸೆರೆ ಹಿಡಿಯಲಾಗಿದೆ.