ಬಾಲಕಿಗೆ ಕಿರುಕುಳ : ಆರೋಪಿ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಡೈರಿಗೆ ಹಾಲು ಹಾಕಿ ಮನೆಗೆ ವಾಪಾಸ್ ಬರುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಜ್ಪೆ ಠಾಣಾ ಪೊಲೀಸರು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕುಪ್ಪೆಪದವು ಮುಹಮ್ಮದ್ ಫೈಝಲ್ (37) ಬಂಧಿತ ಆರೋಪಿ. ಅಕ್ಟೋಬರ್ 10ರಂದು ಬೆಳಿಗ್ಗೆ ಡೈರಿಗೆ ಹಾಲು ಹಾಕಿ ವಾಪಾಸ್ ಮನೆಗೆ ಮರಳುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯ ಮೇಲೆ ಆರೋಪಿ ತನ್ನ ನೀಚ ಕೃತ್ಯ ಪ್ರದರ್ಶನ ಮಾಡಿದ್ದಾನೆ. ಬಳಿಕ ಪರಾರಿಯಾಗಿದ್ದ ಆರೋಪಿ ವಿರುದ್ಧ ಬಾಲಕಿ ಮನೆ ಮಂದಿ ದೂರು ದಾಖಲಿಸಿದ್ದರು. ಇದೀಗ ಬಜ್ಪೆ ಠಾಣಾ ಪೊಲೀಸರು ಆರೋಪಿ ಫೈಝಲ್‍ನನ್ನು ಬಂಧಿಸಿದ್ದಾರೆ.