ಗಾಂಜಾ : ಒಬ್ಬ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಹೊರವಲಯದ ಕುಕ್ಕಿಕಟ್ಟೆ ಸಮೀಪದ ಇಂದಿರಾನಗರ ಮೈದಾನ ಬಳಿ ಮಾದಕ ದ್ರವ್ಯ ಗಾಂಜಾ ಸೇವಿಸುತ್ತಿದ್ದ ಆರೋಪಿ ಯನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಕುಕ್ಕಿಕಟ್ಟೆ ಇಂದಿರಾನಗರ 2ನೇ ಕ್ರಾಸ್ ನಿವಾಸಿ ಎಡ್ವಿನ್ ಮಾಬಿನ್ ಎಂಬವರ ಮಗ ವಿಕ್ಟರ್ ಮಾಬಿನ್ ಎಂಬಾತನೇ  ಬಂಧಿತ ವ್ಯಕ್ತಿ.ಆರೋಪಿ ವಿರುದ್ಧ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.