ಗಾಂಜಾದೊಂದಿಗೆ ಯುವಕ ಬಂಧನ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : 25 ಗ್ರಾಂ ಗಾಂಜಾದೊಂದಿಗೆ ಒಬ್ಬನನ್ನು ಅಬಕಾರಿ ದಳ ಬಂಧಿಸಿದೆ.

ಕೋಡ್ಯಮೆ ಸಮೀಪದ ಬೆಳ್ಳಂಪಾಡಿ ನಿವಾಸಿ ಅಬ್ದುಲ್ಲ (38) ಬಂಧಿತ ಆರೋಪಿ. ಖಚಿತ ಮಾಹಿತಿಯ ಆಧಾರದಲ್ಲಿ ಈತನನ್ನು ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸಹಿತ ಮಾದಕ ವಸ್ತುಗಳ ಮಾರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ರಖಂ ಹಾಗೂ ಚಿಲ್ಲರೆ ರೂಪದಲ್ಲೂ ಮಾದಕ ವಸ್ತು ವಿತರಣೆಯಾಗುತ್ತಿದ್ದು, ಇವುಗಳ ಕಠಿಣ ಕ್ರಮಕ್ಕೆ ಅಬಕಾರಿ ದಳ, ಪೆÇಲೀಸರು ಮುಂದಾಗಿದ್ದಾರೆ.