ಕಾರನ್ನು ಜಖಂಗೊಳಿಸಿ ಪ್ರಯಾಣಿಕರಿಬ್ಬರ ಮೇಲೆ ಹಲ್ಲೆಗೈದ ತಂಡದ ಒಬ್ಬ ಬಂಧನ

ಸಾಂದರ್ಭಿಕ ಚಿತ್ರ

 

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಕನ್ಯಾನದಲ್ಲಿ ಕ್ಷುಲ್ಲಕ ವಿಚಾರಕ್ಕಾಗಿ ಕಾರನ್ನು ಜಖಂಗೊಳಿಸಿ ಪ್ರಯಾಣಿಕರಿಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಕೆಲದಿನಗಳ ಹಿಂದೆ ಕನ್ಯಾನ ಪೇಟೆಯಲ್ಲಿ ನಡುರಸ್ತೆಯಲ್ಲೇ ಜಮಾಯಿಸಿ ಹರಟೆ ಹೊಡೆಯುತ್ತಿದ್ದ ಸಂದರ್ಭ ಕಾರೊಂದು ತಾಗಿತ್ತು. ಇದನ್ನೇ ಪ್ರತಿಷ್ಟೆಯನ್ನಾಗಿಸಿದ ಯುವಕರ ಗುಂಪು ಕಾರನ್ನು ಹಿಂಬಾಲಿಸಿ ತಡೆದು ನಿಲ್ಲಿದ್ದಲ್ಲದೇ ಚಾಲಕ ಮತ್ತು ಪ್ರಯಾಣಿಕನ ಮೇಲೆ ಮನಬಂದಂತೆ ಥಳಿಸಿ ವಾಹನವನ್ನು ಜಖಂಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿನೈದು ಜನರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಪೈಕಿ ಕನ್ಯಾನ ನಿವಾಸಿ ಭಾತಿಷ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 

LEAVE A REPLY