ಉಪ್ಪಿನಕಾಯೆಂದು ನಂಬಿಸಿ ಗಲ್ಫಿಗೆ ತೆರಳುವ ವ್ಯಕ್ತಿಯಲ್ಲಿ ಗಾಂಜಾ ಕಳಿಸಿದವ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಗಲ್ಫ್ ರಾಷ್ಟ್ರಕ್ಕೆ ತೆರಳುವ ವ್ಯಕ್ತಿಯಲ್ಲಿ ಸಂಬಂಧಿಕರಿಗೆ ಕೊಡಲು ಉಪ್ಪಿನಕಾಯಿಯೆಂದು ನಂಬಿಸಿ ಗಾಂಜಾ ಕಟ್ಟನ್ನು ಕೊಟ್ಟು ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೆÇಲೀಸರು ಬಂಧಿಸಿದ್ದಾರೆ.

ವಂಚನೆಯೆಂದು ತಿಳಿಯದೆ ಗಾಂಜಾ ಕಟ್ಟನ್ನು ಕೊಂಡೊಯ್ದ ವ್ಯಕ್ತಿ ಇದೀಗ ಕಳೆದ ಒಂದು ವರ್ಷದಿಂದ ಗಲ್ಫ್ ರಾಷ್ಟ್ರದಲ್ಲಿ ಜೈಲಿನಲ್ಲಿದ್ದಾರೆ.

ಕೋಡಿಯಮ್ಮ ಜುಮಾ ಮಸೀದಿಗೆ ಸಮೀಪದ ಸೂಫಿ(37)ಯನ್ನು ಕುಂಬಳೆ ಪೆÇಲೀಸರು ಬಂಧಿಸಿದ್ದಾರೆ.

ಕೋಡಿಯಮ್ಮ ಚತ್ರ ಪಳ್ಳಂ ನಿವಾಸಿಯಾದ ಬಶೀರ್ ಎಂಬಾತನ ಕೈಯಲ್ಲಿ ಗಾಂಜಾದ ಕಟ್ಟನ್ನು ಉಪ್ಪಿನಕಾಯಿ ಎಂದು ನಂಬಿಸಿ ನೀಡಲಾಗಿತ್ತು. ಒಬ್ಬ ಸ್ನೇಹಿತ ಬಂದು ನಿನ್ನಿಂದ ಪಡೆಯುವನೆಂದು ಹೇಳಿ ನೀಡಲಾಗಿತ್ತು. ಕಟ್ಟನ್ನು ಬ್ಯಾಗಿನಲ್ಲಿಟ್ಟು ತೆರಳಿದ ಬಶೀರನನ್ನು ದೋಹಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಗಾಂಜಾ ಸಿಕ್ಕು ಜೈಲಿಗಟ್ಟಿದ್ದಾರೆ.