ಠಾಣೆಯಲ್ಲಿ ಸೋದರ ಸೊಸೆಯ ಕೊಲೆಗೆ ಯತ್ನಿಸಿದಾತ ಬಂಧನ

ಸಾಂದರ್ಭಿಕ ಚಿತ್ರ

ಗಾಝಿಯಾಬಾದ್ : ಅನ್ಯ ಸಮುದಾಯದ ಯುವಕನೊಂದಿಗೆ ಹೋಗಿ, `ಕುಟುಂಬ ಗೌರವ ಬೀದಿಪಾಲು ಮಾಡಿದ್ದ’ 23 ವರ್ಷದ ಮಹಿಳೆಯನ್ನು ಆಕೆಯ ಹತ್ತಿರದ ಸಂಬಂಧಿಯೊಬ್ಬ ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ಚೂರಿಯಿಂದ ಇರಿದು ಕೊಲ್ಲಲು ಯತ್ನಿಸಿದ  ಘಟನೆ ನಡೆದಿದೆ.

ಲೋನಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ನಡೆಸಿದ ಆರೋಪಿ ಕೈಲಾಸ್ ಕುಮಾರ್ (38) ಎಂಬವನನ್ನು ಬಂಧಿಸಲಾಗಿದೆ.

ಫೆ 13ರಂದು ಮಹಿಳೆಯು ಅನ್ಯ ಜಾತಿಯವನೊಂದಿಗೆ ಮನೆಯಿಂದ ಹೋಗಿದ್ದಳು. ಈ ಬಗ್ಗೆ ದೂರು ನೀಡಲಾದ ಬಳಿಕ, ಜೋಡಿಯನ್ನು ಸೆರೆ ಹಿಡಿದ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆತಂದಿದ್ದರು.

ಚೂರಿಯನ್ನು ಅಡಗಿಸಿಟ್ಟುಕೊಂಡು ಠಾಣೆಗೆ ಆಗಮಿಸಿದ ಕುಮಾರ್ ತನ್ನ ಸೋದರ ಮಗಳಿಗೆ ಇರಿದಿದ್ದಾನೆ.

ಇದೊಂದು ಮರ್ಯಾದಾ ಹತ್ಯೆ ಯತ್ನ ಪ್ರಕರಣವಾಗಿದೆ. ರಾಜ್ಯದಲ್ಲಿ ಇಂತಹ ಹಲವಾರು ಪ್ರಕರಣಗಳು ನಡೆಯುತ್ತಿದ್ದರೂ  ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಅಪೂರ್ವವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದಾರೆ.