ಲಾರಿ ನೌಕರರ ದರೋಡೆ : ಇನ್ನೊಬ್ಬ ಆರೋಪಿ ಬಂಧನ

 

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಲಾರಿ ಚಾಲಕ ಹಾಗೂ ಕ್ಲೀನರಿಗೆ ಆಟಿಕೆ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿ ಎರಡು ಮೊಬೈಲ್ ಫೆÇೀನುಗಳು ಹಾಗೂ 1000 ರೂ ದರೋಡೆಗೈದ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯನ್ನು ಮಂಜೇಶ್ವರ ಪೆÇಲೀಸರು ಬಂಧಿಸಿದ್ದಾರೆ.

ಬಂದ್ಯೋಡು ಅಡ್ಕ ಜುಮಾ ಮಸೀದಿ ಸಮೀಪದ ನಿವಾಸಿ ಆಟೋ ಚಾಲಕ ಅಬ್ದುಲ್ ಲತೀಫ (20)ನನ್ನು ಶುಕ್ರವಾರ ಬಂಧಿಸಲಾಯಿತು.

ನೀರ್ಚಾಲು ಬಳಿಯ ಬಿರ್ಮಿನಡ್ಕ ನಿವಾಸಿ ಬದ್ರುದ್ದೀನ್ (26) ಎಂಬಾತನನ್ನು ಈ ಮೊದಲೇ ಸೆರೆ ಹಿಡಿದಿದ್ದು, ಈತನನ್ನು ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದಾಗ ಅಬ್ದುಲ್ ಲತೀಫ್ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಇದರಂತೆ ಈತನನ್ನು ಸೆರೆಹಿಡಿಯಲಾಗಿದೆ.

ಸೆಪ್ಟೆಂಬರ್ 8ರಂದು ಮುಂಜಾನೆ ಉಪ್ಪಳ ಪೆಟ್ರೋಲ್ ಬಂಕ್ ಸಮೀಪ ದರೋಡೆ ನಡೆದಿದೆ. ಮಹಾರಾಷ್ಟ್ರದಿಂದ ಕೊಚ್ಚಿಗೆ ಸರಕು ಸಾಗಿಸುತ್ತಿದ್ದ ಲಾರಿಯ ಚಾಲಕ ಮಹಾರಾಷ್ಟ್ರದ ಉಜರಬಾದ್ ಜಾಟ್ ಸಾಂಗ್ಲಿ ನಿವಾಸಿ ಗುರುಬಾಸು ಮುರುಗಪ್ಪ (37) ಹಾಗೂ ಕ್ಲೀನರ್ ಲಾರಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಪಿಸ್ತೂಲ್ ತೋರಿಸಿ ಲಾರಿ ನೌಕರರಿಗೆ ಬೆದರಿಕೆಯೊಡ್ಡಿ ಅವರ ಕೈಯಲ್ಲಿದ್ದ 1000 ರೂ ಹಾಗೂ ಎರಡು ಮೊಬೈಲ್ ಕಸಿದು ತಂಡ ಪರಾರಿಯಾಗಿತ್ತೆಂದು ದೂರಲಾಗಿತ್ತು.

ಆರೋಪಿ ಅಬ್ದುಲ್ ಲತೀಫ್ ಮನೆಯಿಂದ ಇವರು ಸಂಚರಿಸಿದ ಬೈಕ್ ಹಾಗೂ ಎರಡು ಮೊಬೈಲನ್ನು ಪೆÇಲೀಸರು ವಶಪಡಿಸಿದ್ದಾರೆ. ಬೆದರಿಸಲು ಉಪಯೋಗಿಸಿದ್ದ ಪಿಸ್ತೂಲನ್ನು ಇನ್ನೊಬ್ಬ ಆರೋಪಿ ಬದ್ರುದ್ದೀನನಿಂದ ಈ ಮೊದಲೇ ವಶಪಡಿಸಲಾಗಿತ್ತು.