ನಿತೀಶ್ `ಗದ್ದಾರ್ ‘: ಮಮತಾ ಕಿಡಿ

ಪಾಟ್ನಾ : ಕೇಂದ್ರ ಸರ್ಕಾರದ ನೋಟು ನಿಷೇಧವನ್ನು ವಿರೋಧಿಸದ ಬಿಜೆಪಿ ವಿರೋಧೀ ರಾಜಕೀಯ ಪಕ್ಷಗಳ ನೀತಿಯನ್ನು ವಿಶ್ವಾಸದ್ರೋಹಿ (ಗದ್ದಾರ್) ಎಂದು ಪಶ್ಚಿಮ ಬಂಗಾಲ ಸೀಎಂ ಮಮತಾ ಬ್ಯಾನರ್ಜಿ ಟೀಕಿಸಿದರು. ಅವರ ಈ ಮಾತು ನೇರವಾಗಿ ಬಿಹಾರ ಸೀಎಂ ನಿತೀಶ್ ಕುಮಾರ್‍ಗೆ ಆಗಿದ್ದರೂ, ಟೀಕೆ ವೇಳೆ ಅವರ ಹೆಸರೆತ್ತದೆ ಕಿಡಿ ಕಾರಿದರು.

“ನೋಟು ನಿಷೇಧ ವಿಷಯದಲ್ಲಿ ಎಲ್ಲ ವಿಪಕ್ಷಗಳು ಒಗ್ಗೂಡಬೇಕು. ಯಾರು ವಿಶ್ವಾಸಘಾಟತಕ ಮಾಡುತ್ತಾರೋ ಅವರನ್ನು ಜನರು ಕ್ಷಮಿಸಲಿಕ್ಕಿಲ್ಲ” ಎಂದು ಮಮತಾ ಹೇಳಿದರು.