ಬಿಜೆಪಿಯ ಸಿನ್ಹಾಗೆ ಮಮತಾ ಬೆಂಬಲ

ಕೋಲ್ಕತ್ತ : “ರೈತರ ಪರವಾಗಿ ಹೋರಾಟ ನಡೆಸುತ್ತಿರುವ ಕೇಂದ್ರ ಮಾಜಿ ಸಚಿವ ಯಶವಂತ ಸಿನ್ಹಾಗೆ ನನ್ನ ಸಂಪೂರ್ಣ ಬೆಂಬಲವಿದೆ” ಎಂದು ಪಶ್ಚಿಮ ಬಂಗಾಲ ಸೀಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.  “ರೈತರ ಪರ ಹೋರಾಟ ನಡೆಸಿದ ಸಿನ್ಹಾರನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದ್ದು,  ಮಹಾರಾಷ್ಟ್ರದ ಅಕೋಲದ ಜೈಲಿನಲ್ಲಿರುವ ಅವರನ್ನು ಕಾಣಲು ತೃಣಮೂಲ ಕಾಂಗ್ರೆಸ್ ಸಂಸದ ದಿನೇಶ್ ತ್ರಿವೇದಿಯನ್ನು ಅಲ್ಲಿಗೆ ಕಳುಹಿಸಿದ್ದೇನೆ” ಎಂದರು. ವಿದರ್ಭ ಪ್ರಾಂತ್ಯದ ನೂರಾರು ಹತ್ತಿ ಮತ್ತು ಸೊಯಾಬಿನ್ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದು, ಅವರ ಪರವಾಗಿ ಬಿಜೆಪಿ ಮುಖಂಡ ಸಿನ್ಹಾ ಹೋರಾಟ ನಡೆಸುತ್ತಿದ್ದಾರೆ.