ಮಾಲ್ಡೀವ್ಸ್: ಅಮಿತಾಬ್ ಹುಟ್ಟುಹಬ್ಬ

ಅಮಿತಾಬ್ ಬಚ್ಚನ್ ನಿನ್ನೆ 75ವರ್ಷ ಪೂರೈಸಿದ್ದು ಅವರ ಹುಟ್ಟುಹಬ್ಬವನ್ನು ಅವರು ಕುಟುಂಬದ ಸದಸ್ಯರೊಂದಿಗೆ ಮಾಲ್ಡೀವ್ಸ್‍ನ ಸುಂದರ ಪರಿಸರದಲ್ಲಿ ಆಚರಿಸಿಕೊಂಡಿದ್ದಾರೆ. ಅಮಿತಾಬ್ ಮಂಗಳವಾರ ಬೆಳಿಗ್ಗೆ ಪತ್ನಿ ಜಯಾ, ಅಭಿಷೇಕ್, ಐಶ್ವರ್ಯಾ, ಮಗಳು ಶ್ವೇತಾ, ಮೊಮ್ಮಕ್ಕಳು ನವ್ಯಾ ನವೇಲಿ ಹಾಗೂ ಆರಾಧ್ಯರ ಜೊತೆ ಮಾಲ್ಡೀವ್ಸ್‍ಗೆ ತೆರಳಿದ್ದು ಅಲ್ಲಿ ರಾತ್ರಿ 12 ಗಂಟೆಗೆ ಕೇಕ್ ಕಟ್ ಮಾಡಿ ಬರ್ತಡೇ ಸೆಲೆಬ್ರೇಟ್ ಮಾಡಿದ್ದಾರೆ.

ಈ ಮೊದಲು ಅಮಿತಾಭ್ ತನಗೆ ಮೊಮ್ಮಗಳು ನವ್ಯಾ ಜೊತೆ ಮಾಲ್ಡೀವ್ಸ್‍ನ ಬೀಚಿನಲ್ಲಿ ವಾಟರ್ ಗೇಮ್ ಆಡುವ ಬಯಕೆಯನ್ನು ಹೇಳಿಕೊಂಡಿದ್ದರು. ಅದಕ್ಕಾಗಿ ಅಭಿಷೇಕ್, ಐಶ್ವರ್ಯಾ, ಶ್ವೇತಾ ಸೇರಿ ಬಿಗ್ ಬಿಗಾಗಿ ಈ ಸರ್ಪೈಸ್ ಫ್ಯಾಮಿಲಿ ಹಾಲಿಡೇ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.