ಮನಪಾದಲ್ಲಿ ಮಲಯಾಳಿಗಳ ಹಾವಳಿ

ಮಂಗಳೂರು ಮಹಾನಗರಪಾಲಿಕೆಯಲ್ಲಿ ಆರೋಗ್ಯ ವಿಭಾಗದ ಅಡಿಯಲ್ಲಿ ಹಾಗೂ ಇನ್ನಿತರ ವಿಭಾಗದಲ್ಲಿ ಕೇರಳದಿಂದ ಬಂದ ಮಲಯಾಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಗುತ್ತಿಗೆ ಮತ್ತು ಶಾಶ್ವತ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ಮನಪಾದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ
ದ ಕ ಜಿಲ್ಲೆಯ ವಿದ್ಯಾವಂತರಿಗೆ ಸಿಗದ ಉದ್ಯೋಗ ಮನಪಾದಲ್ಲಿ ಮಲಯಾಳಿಗಳಿಗೆ ಉದ್ಯೋಗ ಹೇಗೆ ಸಿಗುತ್ತದೆ ಎಂದು ತಿಳಿಯದು. ಇದರಲ್ಲಿ ಸ್ಥಾಪಿತ ಹಿತಾಸಕ್ತಿಗಳ ಕೈವಾಡವಿದೆ. ಮನಪಾದ ಅಧಿಕಾರಿಗಳು ಮಲಯಾಳಿ ಮತ್ತು ತಮಿಳರು ನಡೆಸುವ ಗೂಡಂಗಡಿ ಹಾಗೂ ಇನ್ನಿತರ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಅವರ ಗೂಡಂಗಡಿಗಳಿಗೆ ಮನಪಾದಿಂದ ಯಾವುದೇ ತೊಂದರೆ ಮಾಡುವುದಿಲ್ಲ.
ದಕ್ಷಿಣ ಕನ್ನಡದವರು ಗೂಡಂಗಡಿ ಹಾಗೂ ಇನ್ನಿತರ ಸಣ್ಣ ವ್ಯಾಪಾರ ಮಾಡುತ್ತಿದ್ದರೆ ಮನಪಾದಲ್ಲಿ ದುಡಿಯುವ ಮಲಯಾಳಿಗಳಿಂದ ಹಾಗೂ ಇನ್ನಿತರರಿಂದ ಕಿರುಕುಳ ಎದುರಿಸಬೇಕಾಗುತ್ತದೆ. ಮನಪಾದಲ್ಲಿ ಮಲಯಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ಸೇರಿಕೊಳ್ಳಲು ಯಾರು ಕಾರಣ
ಕೆಲವೇ ವರ್ಷಗಳಲ್ಲಿ ಮನಪಾವು ಮಲಯಾಳಿಗಳ ಆಡಳಿತಕ್ಕೆ ಒಳಪಡುವುದಕ್ಕೆ ಸಂಶಯವಿಲ್ಲ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ಮನಪಾದಿಂದ ಮಲಯಾಳಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾವಂತ ಯುವಕ ಯುವತಿಯರನ್ನು ಮನಪಾದಲ್ಲಿ ನೇಮಿಸಿಕೊಳ್ಳಲಿ

  • ವೀಣಾ ಶೆಟ್ಟಿ