ಕೇರಳದಲ್ಲಿ ಮಲಯಾಳಂ ಕಡ್ಡಾಯ

ಪಿಣರಾಯಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೇರಳದಲ್ಲಿ ಮಾತೃಬಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಮಲಯಾಳಂ ಹೊರತಾಗಿ ಇತರ ಭಾಷೆಗಳಲ್ಲಿ ವ್ಯವಹರಿಸಬಾರದು ಎಂದು ಕೇರಳದ ಮುಖ್ಯಮಂತ್ರಿ ಆದೇಶಿಸಿದ್ದಾರೆ.

“ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸುವ ನಿಯಮಕ್ಕೆ ರಾಜ್ಯಪಾಲರ ಅಂಗೀಕಾರ ದೊರೆತಿದೆ. ಹೀಗಾಗಿ ಶಾಲೆಗಳಲ್ಲಿ ಮಲಯಾಳಂ ಭಾಷೆಯೇ ಪ್ರಧಾನವಾಗಬೇಕು, ಭಾಷೆ ಕಲಿಸಲು ಶಾಲೆ ಹಾಗೂ ಅಧ್ಯಾಪಕರು ಮುಂದಾಗದಿದ್ದಲ್ಲಿ 5000 ರೂ ದಂಡ ವಿಧಿಸಲಾಗುವುದು. ಮಾತೃಭಾಷೆ ಮಲಯಾಳಂ ಹೊರತಾಗಿ ಯಾವುದೇ ಇತರ ಭಾಷೆಯಲ್ಲಿ ಸಂವಹನ ಮಾಡಬಾರದು, ಶಾಲೆ ಸೊತ್ತೊಲೆ, ನೋಟಿಸುಗಳು ಮಲಯಾಳಂ ಭಾಷೆಯಲ್ಲಿಯೇ ಇರಬೇಕು” ಎಂದು ಮುಖ್ಯಮಂತ್ರಿ ಆದೇಶಿಸಿದ್ದಾರೆ.

ಮಲಯಾಳಂ ಭಾಷೆ ಕಲಿಸದ ಶಾಲೆಗಳ ಎನ್ ಒ ಸಿ ರದ್ದು ಮಾಡಲಾಗುವುದು ಮತ್ತು ವೈದ್ಯಕೀಯ ಪರೀಕ್ಷೆ ನೀಟ್ ಅನ್ನು ಹೊರತಾಗಿಸಲಾಗುವುದು ಎಂದು ಅವರು ತಿಳಿಸಿದರು. ಖಾಸಗಿ ಕಾಲೇಜುಗಳಲ್ಲಿ ಪ್ರವೇಶ, ಶುಲ್ಕ ಮೊದಲಾದವನ್ನು ತೀರ್ಮಾನಿಸಲು ವಿಶೇಷ ಸಮಿತಿ ರೂಪಿಸಲಾಗುವುದು ಎಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ.