ಮುಲ್ಕಿಯಲ್ಲಿ ವ್ಯಾಪಕ ಮಲೇರಿಯಾ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ನಗರಪಂಚಾಯತಿ ವ್ಯಾಪ್ತಿಯಲ್ಲಿ ವ್ಯಾಪಕ ಮಲೇರಿಯಾ ಕಾಣಿಸಿಕೊಂಡಿದ್ದು, ಕಳೆದ ನ 26ರಿಂದ ಡಿ 25ರವರೆಗೆ ಸುಮಾರು 43 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದೆ ಎಂದು ಸರಕಾರಿ ಆಸ್ಪತ್ರೆ ಮೂಲಗಳು ತಿಳಿಸಿದೆ.

ಮಲೇರಿಯಾ ಶಂಕಿತ ಪ್ರಕರಣಗಳು ಸುಮಾರು 310 ಪತ್ತೆಯಾಗಿದ್ದು, ಮಲೇರಿಯಾ ನಿಯಂತ್ರಣಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಮಲೇರಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಮೂವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೆ ಎಸ್ ರಾವ್ ನಗರದ ವಿಜಾಪುರ ಕಾಲೊನಿಯ ನಿವಾಸಿಗಳಾದ ಸುರೇಶ(40), ಮಾರುತಿ (11), ಕಮಲ (80) ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮುಲ್ಕಿ ಬಪ್ಪನಾಡು ಬಳಿಯ ನೇಚರ್ ಟೆಂಪಲ್ ಪಾರ್ಕ್ ಹಾಗೂ ಕೆ ಎಸ್ ರಾವ್ ನಗರದ ವಿಜಾಪುರ ಕಾಲೊನಿಯ ಒಳಚರಂಡಿ ಅವ್ಯವಸ್ಥೆಯಿಂದ ಮಲೇರಿಯಾ ವ್ಯಾಪಕವಾಗಿ ಹರಡುತ್ತಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.