ನ್ಯಾಯಾಲಯಗಳಲ್ಲಿ ರಾಷ್ಟ್ರಗೀತೆ ಪ್ರಚಾರಕ್ಕೆ ಆದೇಶ ನೀಡಲಿ

ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಬೇಕೆಂದು ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ. ಆದರೆ ಸಾವಿರಾರು ಮೊಕದ್ದಮೆಗಳು ನ್ಯಾಯಾಲಯದಲ್ಲಿ ರಾಶಿ ರಾಶಿ ಬಿದ್ದಿರುವಾಗ ನ್ಯಾಯಾಲಯ ಚಿತ್ರಮಂದಿರ ಮತ್ತು ರಾಷ್ಟ್ರಗೀತೆಯ ಬಗೆಗೆ ತಲೆ ಕೆಡಿಸಿಕೊಂಡಿರುವುದು ಅಚ್ಚರಿ ತರಿಸುತ್ತಿದೆ. ಇದರ ಬಗೆಗೆ ಆದೇಶ ನೀಡಿದಂತೆಯೇ ವಿಲೇವಾರಿಯಾಗದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೂ ನ್ಯಾಯಾಲಯ ಆದೇಶ ನೀಡಲಿ.
ಎಲ್ಲರೂ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ನೀಡಿದರೆ ಚಿತ್ರ ಪ್ರದರ್ಶನ ಅಂತ್ಯವಾದಾಗ ವಂದೇ ಮಾತರಂ ಪ್ರಸಾರ ಮಾಡಬೇಕು ಅಲ್ಲವೇ ? ಹಾಗೆಯೇ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಎಂದು ಆದೇಶ ನೀಡುವ ನ್ಯಾಯಾಲಯ ಮೊದಲು ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರತಿನಿತ್ಯ ಕಲಾಪ ಆರಂಭವಾಗುವ ಮತ್ತು ಕಲಾಪ ಕೊನೆಗೊಳ್ಳುವ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಬೇಕೆಂದು ಕಡ್ಡಾಯ ಮಾಡಿ ಆದೇಶ ಹೊರಡಿಸಲಿ.

  • ಅನಿಲ್ ಕೋಟ್ಯಾನ್, ಕೊಡಿಯಾಲ್‍ಬೈಲ್-ಮಂಗಳೂರು