ಜಿಲ್ಲೆಯಲ್ಲಿ ಶಾಂತಿ ಕಾಪಾಡಿ

ಕಾಸರಗೋಡಿನಲ್ಲಿ ಆರೆಸ್ಸೆಸ್-ಕಮ್ಯುನಿಸ್ಟ್ ನಿತ್ಯ ಕದನದಿಂದ ಅಲ್ಲಿನ ಶಾಂತಿ ಕದಡಿ ಹೋಗಿದೆ. ಅದೀಗ ದ ಕ ಜಿಲ್ಲೆಗೆ ವ್ಯಾಪಿಸುವಂತೆ ಕಂಡುಬರುತ್ತಿದೆ. ನಮ್ಮಲ್ಲಿ ಕೋಮುಗಲಭೆಯಿಂದ ಈಗಾಗಲೇ ಬಹಳಷ್ಟು ನಷ್ಟ ಸಂಭವಿಸಿದೆ. ಈಗ ಆರೆಸ್ಸೆಸ್, ಕಮ್ಯೂನಿಸ್ಟ್ ತಿಕ್ಕಾಟ ಆರಂಭವಾಗಿದೆ. ಯಾವುದೇ ಬೆಲೆತೆತ್ತು ದ ಕ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಕೆಲಸವಾಗಲಿ

  • ರಘು ಉರ್ವ  ಮಂಗಳೂರು