ಆನೆ ದಾಳಿಗೆ ಮಾವುತ ಬಲಿ

ಸಾಂದರ್ಭಿಕ ಚಿತ್ರ

ಮಡಿಕೇರಿ : ಇಲ್ಲಿನ ದುಬಾರೆ ಆನೆ ಕ್ಯಾಂಪಿನಲ್ಲಿ ನಿನ್ನೆ ಅರಣ್ಯ ಇಲಾಖೆಯ ಮದವೇರಿದ ಆನೆಯೊಂದು ನಡೆಸಿದ ದಾಳಿಗೆ ಮಾವುತ ಮೃತಪಟ್ಟಿದ್ದಾನೆ.

ಆನೆಯೊಂದನ್ನು ಹುಡುಕಾಡುತ್ತ ಅರಣ್ಯ ಪ್ರದೇಶದೊಳಗೆ ಹೋಗಿದ್ದ ಮಾವುತ ಅಣ್ಣುವನ್ನು  ಕಾರ್ತಿಕ್ ಹೆಸರಿನ ಏಳು ವರ್ಷದ ಆನೆಯೊಂದು ಅಟ್ಟಿಸುತ್ತ ಬಂದು, ಹೊಟ್ಟೆಗೆ ದಂತದಿಂದ ತಿವಿದಿದೆ. ಈ ಘಟನೆ ನಿನ್ನೆ ಬೆಳಿಗ್ಗೆ 9 ಗಂಟೆಗೆ ಸಂಭವಿಸಿದೆ.

ಗಂಭೀರ ಗಾಯಗೊಂಡ ಅಣ್ಣುವನ್ನು ಇನ್ನೊಬ್ಬ ಸಿಬ್ಬಂದಿ ತಕ್ಷಣ ಆನೆಯಿಂದ ಪಾರು ಮಾಡಿ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದೆ ಅವರು ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದರು. ಅಣ್ಣು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಧಾವಿಸಿದ್ದಾರೆ. ದುಬಾರೆ ಕ್ಯಾಂಪಿನಲ್ಲಿ ನಡೆದ ಪ್ರಥಮ ಪ್ರಕರಣ ಇದಾಗಿದೆ. ಇಲ್ಲಿ ಈವರೆಗೂ ಪ್ರವಾಸಿಗಳು ಅಥವಾ ಮಾವುತರ ಮೇಲೆ ಆನೆಗಳು ಎರಗಿಲ್ಲ. ಎಂದು ಅರಣ್ಯಾಧಿಕಾರಿ ಚಿನ್ನಪ್ಪ ತಿಳಿಸಿದರು.