13,800 ಕೋಟಿ ರೂ ಆದಾಯ ಘೋಷಿಸಿದ ಮಹೇಶ್ ಶಾ ಜತೆ ಅಮಿತ್ ಶಾ ಗಳಸ್ಯಕಂಠಸ್ಯ

ಅಹಮ್ಮದಾಬಾದ್ : 13,800 ಕೋಟಿ ರೂ ದಾಖಲೆ ಘೋಷಿಸಿಕೊಂಡಿರುವ ಉದ್ಯಮಿ ಮಹೇಶ್ ಶಾ ಈ ಹಿಂದೆ ಗುಜರಾತ್ ಸೀಎಂ ಕಚೇರಿಗೆ ಮುಕ್ತವಾಗಿ ಪ್ರವೇಶಿಸುತ್ತಿದ್ದ ಎಂದು ಗುಜರಾತ್ ಮಾಜಿ ಸೀಎಂ ಸುರೇಶ್‍ಭಾೈ ಮೆಹ್ತಾ ಹೇಳಿಕೆ ನೀಡಿದ್ದು, ಈ ಆರೋಪಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಕ್ಷಣ ಪ್ರತಿಕ್ರಿಯೆ ನೀಡಬೇಕೆಂದು ದಿಲ್ಲಿ ಸೀಎಂ ಕೇಜ್ರಿವಾಲ್ ಆಗ್ರಹಿಸಿದರು.

ಮಹೇಶ್ ಶಾ ಡಿಸೆಂಬರ್ 3ರಂದು ಟೀವಿ ಚಾನೆಲೊಂದರಲ್ಲಿ ಕೇಂದ್ರದ ಆದಾಯ ಘೋಷಣೆ ಯೋಜನೆಯಡಿ ಇಷ್ಟೊಂದು ಆದಾಯ ದಾಖಲೆ ಪ್ರಕಟಿಸಿದಲ್ಲದೆ, ತಾನು ರಾಜಕಾರಣಿಗಳು ಮತ್ತು ಉದ್ಯೋಗಪತಿಗಳ ಮುಂಚೂಣಿಯ ವ್ಯಕ್ತಿ ಎಂದುಕೊಂಡಿರುವುದು ತೀವ್ರ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.

ನರೇಂದ್ರ ಮೋದಿ ಸೀಎಂ ಆಗಿದ್ದಾಗ ಈ ಉದ್ಯಮಿ ಮಹೇಶ್ ಶಾ, ಅವರ ಕಚೇರಿಯೊಳಗೆ ಮುಕ್ತವಾಗಿ ಪ್ರವೇಶಿಸುತ್ತಿದ್ದ ಎಂದು ಗುಜರಾತ್ ಮಾಜಿ ಸೀಎಂ ಮೆಹ್ತಾ ಹೇಳಿದ್ದಾರೆ.

ಮಹೇಶ್ ಶಾನ ಹಣದಲ್ಲಿ ಬಹುಪಾಲು `ಜನರಲ್ ಡಾಯರ್’ನಂತಿರುವ ಬಿಜೆಪಿ ಅಧ್ಯಕ್ಷರದ್ದಾಗಿದೆ ಎಂದು ಆರೋಪಿಸಿರುವ ಹಾರ್ದಿಕ್ ಪಟೇಲ್, ಇದು ತನಿಖೆಯಿಂದ ಬಯಲಾಗಲಿದೆ ಎಂದರು.