ಜಾದೂಗಾರ ಪ್ರಹ್ಲಾದ ಆಚಾರ್ಯಗೆ ಪ್ರಶಸ್ತಿ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಪ್ರಸಿದ್ದ ಜಾದೂಗಾರ ಮತ್ತು ಛಾಯಾ ನಾಟಕ ಕಲಾವಿದ ಪ್ರಹ್ಲಾದ ಆಚಾರ್ಯರನ್ನು ವಾರ್ಷಿಕ ಅಲೆವೂರು ಗ್ರೂಪ್ ಅವಾರ್ಡಿಗೆ ಆರಿಸಲಾಗಿದೆ.

ಉಡುಪಿ ನಿವಾಸಿ, ಬಾಲ್ಯದಿ ಂದಲೂ ಜಾದೂಗಾ ರಿಕೆಯನ್ನು ಜೀವನದಲ್ಲಿ ಅರಗಿಸಿಕೊಂಡಿರುವ ಪ್ರಹ್ಲಾದ್, ತನ್ನ ಮಾತನಾಡುವ ಮಂಗನ ಮೂಲಕ ಯಕ್ಷಿಣಿಗಾರ ಎಂದು ಚಿರಪರಿಚಿತರಾಗಿದ್ದಾರೆ. ಮಾತ್ರವಲ್ಲ ಪ್ರಹ್ಲಾದ್ ಛಾಯಾ ನಾಟಕ ಕಲಾವಿದರಾಗಿದ್ದು, ಕಲರ್ಸ್ ಟೀವಿಯ `ಇಂಡಿಯಾ ಹ್ಯಾಸ್ ಗಾಟ್ ಟ್ಯಾಲಂಟ್” ಖ್ಯಾತಿಯನ್ನು ಪಡೆದಿದ್ದಾರೆ.

ಪ್ರಹ್ಲಾದರ ಕೆಲವು ದೇಶಪ್ರೇಮದ ನೆರಳು ನಾಟಕಗಳ ವಿಡಿಯೋಗಳು ಸಮಾಜಿಕ ತಾಣಗಳಲ್ಲೂ ಹರಿದಾಡುತ್ತಿವೆ. ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿ ಎಚ್ ಎಸ್ ಬಳ್ಳಾಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 17ರಂದು ಅಲೆವೂರಿನಲ್ಲಿ ನಡೆಯಲಿದೆ ಎಂದು ಶನಿವಾರ ವಿ ವಿ ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.