ವಿದ್ಯಾರ್ಥಿಗೆ ಬೆತ್ತದಿಂದ ಹೊಡೆದು ಗಾಯ : ಮದ್ರಸ ಅಧ್ಯಾಪಕ ಸೆರೆ

ವಿದ್ಯಾರ್ಥಿ ಕೈಯಲ್ಲಿ ಅಧ್ಯಾಪಕನ ಬೆತ್ತದ ಹೊಡೆತದ ಗುರುತು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವಿದ್ಯಾರ್ಥಿಯೊಬ್ಬನನ್ನು ಬೆತ್ತದಿಂದ ಹೊಡೆದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮದ್ರಸ ಅಧ್ಯಾಪಕನೊಬ್ಬನನ್ನು ಬಂಧಿಸಲಾಗಿದೆ.

ಚೆರ್ಕಳ ಬೇವಿಂಜೆ ಸ್ಟಾರ್ ನಗರದ ಮದ್ರಸ ಅಧ್ಯಾಪಕ ಹಾಗೂ ಉಪ್ಪಳ ನಿವಾಸಿಯೂ ಆಗಿರುವ ಜಲೀಲ್ ಎಂಬಾತಗೆ ನ್ಯಾಯಾಲಯ ಬಂಧನ ವಿಧಿಸಿದೆ.

ಬೇವಿಂಜೆ ಶೆರೀಫ್ ಎಂಬವರ ಪುತ್ರ ಆರಿಫ್(10)ನನ್ನು ಹೊಡೆದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧನ ವಿಧಿಸಲಾಗಿದೆ. ಆರಿಫ್‍ಕೈ ಹಾಗೂ ಬೆನ್ನಿಗೆ ಬೆತ್ತದಿಂದ ಹೊಡೆದ ಗಾಯಗಳಿವೆ. ಆರಿಫನನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.

ಸಹೋದರ ಮೊಹಮ್ಮದ್ ಕುಂಞÂ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ.