ವಿವಾಹಿತೆಗೆ ವಾಟ್ಸಪಲ್ಲಿ ಅಶ್ಲೀಲ ವಿಡಿಯೋ ಕಳಿಸಿದ ಮದ್ರಸ ಅಧ್ಯಾಪಕಗೆ ಗೂಸಾ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವಿವಾಹಿತ ಮಹಿಳೆಯೊಬ್ಬಳಿಗೆ ಸಾಮಾಜಿಕ ತಾಣವಾದ ವಾಟ್ಸಪಿನಲ್ಲಿ ಅಶ್ಲೀಲ ವಿಡಿಯೋ ಕಳುಹಿಸಿದ ಆರೋಪದಲ್ಲಿ ಸ್ಥಳೀಯರು ಮದ್ರಸವೊಂದಕ್ಕೆ ನುಗ್ಗಿ ಅಧ್ಯಾಪಕಗೆ ಹಿಗ್ಗಾಮಗ್ಗಾ ಥಳಿಸಿದ ಬಗ್ಗೆ ಕರ್ನಾಟಕ-ಕೇರಳ ಗಡಿ ಪ್ರದೇಶವಾದ ಬಾಚಲಿಗೆ ಪರಿಸರದಿಂದ ವರದಿಯಾಗಿದೆ.

ಮದ್ರಸವೊಂದರಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಅಧ್ಯಾಪಕ ಈ ಕೃತ್ಯ ನಡೆಸಿರುವುದಾಗಿ ಆರೋಪ ಕೇಳಿ ಬಂದಿದೆ. ಮೊದಲು ಅಪರಿಚಿತ ವಿವಾಹಿತ ಮಹಿಳೆಯೊಬ್ಬಳಲ್ಲಿ ಸೌಮ್ಯವಾಗಿ ಮಾತನಾಡಿ, ಮೊಬೈಲ್ ನಂಬ್ರವನ್ನು ಪಡಕೊಂಡ ಬಳಿಕ ವಾಟ್ಸಪಿನಲ್ಲಿ ತಾನೇ ಕುಣಿಯುತ್ತಿರುವ ದೃಶ್ಯವನ್ನು ಚಿತ್ರೀಕರಿಸಿ ಅದರೊಂದಿಗೆ ಅಶ್ಲೀಲ ಸಂದೇಶವನ್ನು ಕಳಿಸಿ ಸೆಕ್ಸ್ ಪಾಠದ ಒಂದನೇ ಭಾಗವೆಂದು ತಿಳಿಸಿದ್ದಾರೆನ್ನಲಾಗಿದೆ. ಇದನ್ನು ಮಹಿಳೆ ಸಂಬಂಧಿಕರಿಗೆ ತೋರಿಸಿದಾಗ ಆಕ್ರೋಶಿತರಾದ ಕುಟುಂಬಸ್ಥರು ಹಾಗೂ ಊರವರು ಮದ್ರಸಕ್ಕೆ ನುಗ್ಗಿ ಥಳಿಸಿರುವುದಾಗಿ ತಿಳಿದು ಬಂದಿದೆ.