ಹಳೆ ನೋಟುಗಳ ವಿನಿಮಯಕ್ಕೆ ತನ್ನ 2000 ಉದ್ಯೋಗಿಗಳನ್ನು ಬಳಸಿದ್ದ ಲುಧಿಯಾನ ಉದ್ಯಮಿ

ಲುಧಿಯಾನ :  ಆದಾಯ ತೆರಿಗೆ  ಅಧಿಕಾರಿಗಳ ದಾಳಿ ಸಂದರ್ಭ ರೂ 72 ಲಕ್ಷ ಮೌಲ್ಯದ ಹೊಸ ರೂ 2000 ನೋಟುಗಳ ಸಹಿತ ರೂ 1.20 ಕೋಟಿ ಹಣದೊಂದಿಗೆ ಸಿಕ್ಕಿ ಬಿದ್ದಿದ್ದ ಲುಧಿಯಾನದ ಆಟೋ ಬಿಡಿಭಾಗಗಳ ಡೀಲರ್ ಎಸ್ ಬಜಾಜ್ ಆಸಕ್ತಿದಾಯಕ ಮಾಹಿತಿಯೊಂದನ್ನು ಅಧಿಕಾರಿಗಳಿಗೆ  ಬಹಿರಂಗಗೊಳಿಸಿದ್ದಾನೆ. ಆತನ ಪ್ರಕಾರ ಆತ ತನ್ನ ಸುಮಾರು 2000 ಉದ್ಯೋಗಿಗಳನ್ನು ಬ್ಯಾಂಕುಗಳಿಗೆ ಕಳುಹಿಸಿ ಅಮಾನ್ಯಗೊಂಡಿರುವ ಹಳೆ ನೊಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿದ್ದ.