ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ , ಪ್ರಯಾಣಿಕರು ಪಾರು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಹೆದ್ದಾರಿ ಬಲಭಾಗದಲ್ಲಿ ಲಾರಿಯೊಂದನ್ನು ಯಾವುದೇ ಎಚ್ಚರಿಕಾ ದೀಪ ಹಾಕದೆ ನಿಲ್ಲಿಸಿ ಹೋಗಿದ್ದರಿಂದ ಲಾರಿ ಗಮನಕ್ಕೆ ಬಾರದೆ ಕಾರು ಚಾಲಕರೋರ್ವರು ನೇರವಾಗಿ ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದ್ದು ಅದರಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲ ಪಾರಾಗಿದ್ದಾರೆ.

ರಾತ್ರಿ 10-30ರ ಸುಮಾರಿಗೆ ಕಟಪಾಡಿ ಪೇಟೆಯ ಸಮೀಪ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗಿಂತ ಹಾಲಾಡಿ ಲಾರಿ ಕೆಟ್ಟು ಹೋಗಿದೆ ಎಂಬುದಾಗಿ ಲಾರಿಯನ್ನು ಅಲ್ಲೇ ಬಿಟ್ಟಿದ್ದರು. ಕಾರು ಕಾಪುವಿನ ಇನ್ನಂಜೆಯಿಂದ ಮಣಿಪಾಲಕ್ಕೆ ಹೋಗುತ್ತಿದ್ದು,  ಲಾರಿಗೆ ಡಿಕ್ಕಿಯಾಗುತ್ತಿದಂತೆ ಲಾರಿ ಚಾಲಕ ಲಾರಿಬಿಟ್ಟು ಪಲಾಯನ ಮಾಡಿದ್ದಾನೆ.

ಕಾಪು ಪೇಟೆಯ ಸಮೀಪ ನಿರಂತರವಾಗಿ ರಾತ್ರಿ ಸಮಯದಲ್ಲಿ ಲಾರಿ ಚಾಲಕರುಗಳು ತಮ್ಮ ಲಾರಿಗಳನ್ನು ಹೆದ್ದಾರಿಯಲ್ಲೇ ಪಾರ್ಕ್ ಮಾಡುತ್ತಿದ್ದು ಅದರಿಂದ ಅದೇಷ್ಟೋ ಅಪಘಾತಗಳು ಸಂಭವಿಸುತ್ತಿದ್ದರೂ ಪೊಲೀಸರು ಎಚ್ಚೆತ್ತುಗೊಂಡಿಲ್ಲ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.