ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ; ಮಾಜಿ ನ ಪಂ ಅಧ್ಯಕ್ಷ ಪಾರು

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಚಲಾಯುಸುತ್ತಿದ್ದ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ ಅವರು ಪಾರಾದ ಘಟನೆ ಕಾವಿನಲ್ಲಿ ನಡೆದಿದೆ.

ಪುತ್ತೂರಿನ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಸಂಜೆ ವೇಳೆ ಕಾರ್ಯಕ್ರಮ ಮುಗಿಸಿ ತಮ್ಮ ಮನೆಗೆ ತೆರಳುತ್ತಿದ್ದರು. ಸುಳ್ಯದಿಂದ ಪುತ್ತೂರಿಗೆ ಬರುವ ವೇಳೆ ಪತ್ನಿಯೂ ಜೊತೆಗಿದ್ದರು. ಆದರೆ ಮರಳಿ ಸುಳ್ಯಕ್ಕೆ ತೆರಳುವ ವೇಳೆ ರಾಮಚಂದ್ರ ಅವರ ಪತ್ನಿ ಯಶೋಧಾ ತನ್ನ ಸಂಬಂಧಿಕರ ಕಾರಿನಲ್ಲಿ ತೆರಳಿದ್ದರು. ರಾಮಚಂದ್ರ ಅವರ ಕಾರಿನಲ್ಲಿ ಅವರ ಸಂಬಂಧಿ ವನಶ್ರೀ ಎಂಬವರಿದ್ದರು. ಕಾರು ಕಾವು ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ವನಶ್ರೀ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.